Tuesday, December 7, 2010

ಕನಸಿಗೆ ಯಾವ ಬಣ್ಣ

ಗೀರಿಶ್ ಕಾರ್ನಾಡ್ ರ, 'ಯಯಾತಿ' ನಾಟಕದ ಮೊದಲ ಸಾಲು "ಬೆಳಕಿಲ್ಲದ ದಾರಿಯಲ್ಲಿ ನಡೆಬಹುದು,ಕನಸೇ ಇಲ್ಲದ ದಾರಿಯಲ್ಲಿ ನಡೆಯಬಹುದೇ"..ಇದು ಎಲ್ಲಾ ಕಾಲಕ್ಕೂ ಪಸ್ತುತ,ಎಲ್ಲರಿಗೂ ಅವರದ್ದೇ ಆದ ದುಖ:ಬೆನ್ನೀಗಿದ್ದ ಹಾಗೆ ಕನಸೂ ಇರತ್ತೇ,ದುಖ: ಭೂತಕಾಲ ನೆನಸಿದ್ರೆ,ಕನಸು ಭವಿಷ್ಯತ್ ಬಿಂಬಿಸತ್ತೇ.."ಕನುಸಗಳ ಮಾತು ಮದುರ" ಅಲ್ಲವೇ,..ನಮ್ಮ ಕನಸು ಎಷ್ಟರ ಮಟ್ಟಿಗೆ ಪ್ರಾಕಟಿಕಲ್, ಅಲ್ಲೀರೋದು  ಪ್ರಶ್ನೆ ..ನಾನು 5.0 ಅಡಿ ಇದ್ದು ಪೈಲೆಟ್ ಆಗೊ ಕನಸು ಕಂಡ್ರೆ ಆಗೋ ಮಾತೇ...ಗೀಟಾರ್ ಇಡಿಯೊ ಸ್ಟೈಲ್ ಇಷ್ಟ ಅಂತ ಗಿಟಾರ ಕ್ಲಾಸ್ಗೆ ಹೋಗಿ ಮೊದಲನೆ ದಿವಸಾನೇ..'ಸ್ಫಟ್ ಲೈಟ್' ಹಾಕಿಸಕೋಂಡು ಚೇರ್ ಮೇಲೆ ಕೂತು, ಅರಂಗೇಟ್ರಂ ಕೋಟ್ಟ ಹಾಗೆ ಕನಸು ಕಂಡ್ರೆ...ಕನಸು ತೀರ ಅಸಂಬದ್ದ ವಾಗಿದ್ರೇ ಏನು ಚಂದ....ನಾನು ಕಾಣೋ ಕನಸು ನನ್ನೋಳಗಿಂದ ಹುಟ್ಟಿರಬೇಕಲ್ಲವ್ವೇ,..ನನ್ನ ಇಷ್ಟ ಏನು,ನಾನು ಸಮಯದ ಅರಿವು ಇಲ್ಲದೇ ಯಾವ ಕೆಲಸ ಮಾಡಬಹುದು..ಅಂತ ಕೆಲಸದ ಜೊತೆ ಕನಸು ಕಟ್ಟಿಕೊಂಡ್ರೆ ನಮ್ಮ ಕನಸಿಗೆ ಬಣ್ಣ ತುಂಬಹುದೇನೋ ...ಗಂಟೆಗಟ್ಟಲೇ ಕೋತು ಚಿತ್ರ ಬಿಡಸೋರು,ಬರೀಯೋಕೆ ಕೋತರೆ ರಾತ್ರಿ ಹಗಲು ತಿಳೀದೆ ಬರಿಯೋರು,ಲೆಕ್ಕ ಬಿಡಿಸೋಕೆ ಕೂತವರು ಉತ್ತರ ಬಂದ ಮೇಲೆ ತಲೆ ಎತ್ತೋರು....ಇಂಗೆ.,ನಮ್ಮ ಕ್ರೀಯಾಶೀಲತೆ ಎಲ್ಲೀದೆ ಅಂತ ಹುಡುಕಿ ತಗೆದು ಕನಸು ಕಟ್ಟಬೇಕು..ಸುಮ್ನೆ ಬ್ಲೈಂಡಾಗಿ ಕನಸು ಕಾಣೋದು,ಅರ್ದಂಬರ್ದ ಪ್ರಯತ್ನ ಮಾಡಿ ಕೈಬಿಟ್ಟು ಆಮೇಲೆ ಹಣೆಬರಹ ಅಂತ ದೂರೊದು..."ಅವನ ಮುಖ ನೋಡಿದ್ಯಾ ಚಪಾತಿ ತರಹ ಇದೆ ಇವನ್ನೆಲ್ಲಾ ಹೀರೋ","ಏ ಅವನೆದೇನು ಮಹಾ ಫಸ್ಟ ಕ್ಲಾಸು ಬಿಡೋ,ಬರಿ ಉರು ಹೊಡಿತನೆ"..ಹು ಹೂ..ಈ ತರಹದ ಆಟಿಟ್ಯೂಡ್ ನಿಂದ ಉಪಯೋಗ ಖಂಡಿತ ಆಗೋಲ್ಲಾ..ನನ್ನ ಕನಸಿಗೆ ನನ್ನ ಇವತ್ತಿನ ದುಡಿಮೆ ಏನು.....ಲೇಖಕ ಆಗಬೇಕಂತಿರೋ ನಾನು ಕೋನೆ ಪಕ್ಷ ಡೈರಿನೂ ದಿನಾ ಬರಿದೇ ಹೋದ್ರೆ,.ಯಾರು ಎನೇ ಸಾದಿಸಿದ್ರು ಅದರ ಹಿಂದೆ ಅವರ ಶ್ರಮ ಇರತ್ತೇ..ಇದ್ನ ತಿಳಿದುಕೊಂಡು ನಮ್ಮ ಕನಸ ಕಡೆ ಹೆಜ್ಜೆ ಹಾಕೋಣ,ನಮ್ಮ ಕನಸಿಗೆ ಬಣ್ಣ ಹಚ್ಚೋ ತಾಕತ್ತೂ ನಮಗೇ ಇರೋದು......ಅಲ್ಲವೆ

ಓದ್ದಿದ್ದೂ ಮೆಚ್ಚಿದ್ದೂ

ಸೂಫಿ ಸಾಹಿತ್ಯದ ವೈಶಿಷ್ಠ ಏನೆಂದರೆ ಅಧ್ಯಾತ್ಮದಂತ ಸೋಫಾಸ್ಟಿಕೇಟೆಡ ವಿಷಯವನ್ನ ತೂಂಬಾ ಸರಳವಾಗಿ ಸಾಮಾನ್ಯ ಮನುಷ್ಯನಿಗೂ ಅರ್ಥವಾಗೋ ರೀತಿಯಲ್ಲಿ ಅದರ ಗಂಧ ಕೆಡದ ಹಾಗೆ ವಿವರಿಸೊದೆ ಆಗಿದೆ ಅಂತ ನನ್ನ ಅನಿಸಿಕೆ...ಕನ್ನಡ ಸಾಹಿತ್ಯದಲ್ಲಿ ವಚನಗಳ ರೀತಿ ಅಂತಾನು ಭಾವಿಸಬಹುದು.. ನನಗೆ ಇಷ್ಟವಾದ ಕೆಲವು ಕವನಗಳು ಇಲ್ಲಿವೆ..

ಎಲ್ಲೆಲ್ಲಿ ನಿನ್ನ ಅರಸಿದೆ,
ಕೇಳಿದೆ ಕಂಡ ಕಂಡವರನೆಲ್ಲಾ..
ಕೋನೆಗೆ.......
ನನ್ನ ಹೃದಯದಲ್ಲೋಮ್ಮೆ ಇಣುಕಿದಾಗ
ನೀನೆಂಬುವವನು ನಾನೋ ಅಥವ ನಾನೆಂಬುವವಳು ನೀನೋ..
ನಿನ್ನ ಹುಡುಕಿದನೆಂದು ತಿಳಿದು ನಾಚಿಕೆಯಾಯಿತು...
            ------
ತನ್ನ ಪ್ರಿಯತಮೆಯ ಮನೆಯ ಬಾಗಿಲು ತಟ್ಟಿದ ಆತ
ಯಾರದು? ಒಳಗಿನಿಂದ ಕೇಳಿತು ದನಿ
'ನಾನು' ಎಂದನಾತ..
ಈ ಮನೆಯಲ್ಲಿ ಇಬ್ಬರಿಗೆ ಸ್ಥಳವಿಲ್ಲಾ
ಬಾಗಿಲು ತೆರೆಯಲೆ ಇಲ್ಲಾ.....
ಹತಾಶ ಪ್ರಿಯಕರ ಮರುಭೂಮಿಗೆ ಹೋದ
ಏಕಾಂತದಲ್ಲಿ ಉಪವಾಸ ತಪ್ಪಸ್ಸು...
ಪ್ರಿಯತಮೆಯನ್ನು ಪಡೆಯಲೆಬೇಕೆಂಬ ಹಠ
ಒಂದು ವರ್ಷದ ನಂತರ ಹಿಂದುರಿಗಿದ
ಪ್ರಿಯತಮೆಯ ಮನೆಯ ಬಾಗಿಲು ತಟ್ಟಿದ
ಯಾರದು? ಮತ್ತೇ ಕೇಳಿತು ದನಿ
'ನೀನೆ' ಹೇಳಿದ ಪ್ರಿಯಕರ
ಬಾಗಿಲು ತೆರೆಯಿತು
ಕೇವಲ
'ಆತನಿಗಾಗಿ'-
             ---------

ನಾನು ಪ್ರೀತಿಸುವ ಆತನು ನಾನೆ
ಒಂದೇ ದೇಹದ ಮನೆಯ ಎರಡು ಆತ್ಮಗಳು ನಾವು
ನನ್ನನ್ನೂ ನೋಡುವವರು ಆತನ್ನನ್ನೂ ಕಾಣುತ್ತಾರೆ
ಆತನನ್ನು ನೋಡುವವರು ನಮ್ಮಿಬ್ಬರನ್ನು ಕಾಣುತ್ತಾರೆ...